ನ್ಯಾಷನಲ್ ಇನ್ಶೂರೆನ್ಸ್ ಕಂಪನಿಯಲ್ಲಿ ಉದ್ಯೋಗ | National Insurance Company Limited Recruitment 2024

ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (NICL) ನಲ್ಲಿ ಅಗತ್ಯವಿರುವ ಅಸಿಸ್ಟಂಟ್ಸ್ ಪೋಸ್ಟ್ ಗಳನ್ನು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (National Insurance Company Limited Recruitment 2024) ಅಸಿಸ್ಟಂಟ್ಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಹುದ್ದೆ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ವೇತನ, ವಯಸ್ಸಿನ ಮೀತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲಾ ಮಾಹಿತಿಯನ್ನು ಕೆಳಗೆ ಇಲ್ಲಿದೆ.

National Insurance Company Limited Recruitment 2024 ಸಂಕ್ಷಿಪ್ತ ವಿವರ:

ಇಲಾಖೆ: ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್
ಹುದ್ದೆ : ಅಸಿಸ್ಟಂಟ್ಸ್ (Assistant)
ಕರ್ತವ್ಯದ ಸ್ಥಳ: ಕರ್ನಾಟಕ ಸೇರಿದಂತೆ ಭಾರತದೆಲ್ಲೆಡೆ
ಹುದ್ದೆಗಳ ಸಂಖ್ಯೆ: 500
ಕರ್ನಾಟಕದಲ್ಲಿ ಹುದ್ದೆಗಳ ಸಂಖ್ಯೆ: 40

ಶೈಕ್ಷಣಿಕ ಅರ್ಹತೆ:
ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿ ವಿದ್ಯಾರ್ಹತೆಯನ್ನು ಪೂರ್ಣಗೊಳಿಸರಬೇಕು.

ವಯೋಮಿತಿ:
ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ದಿನಾಂಕ ಅಕ್ಟೋಬರ್ 01, 2024 ರಂತೆ ವಯೋಮಿತಿ ಕನಿಷ್ಠ 21 ವರ್ಷಗಳನ್ನು ಪೂರೈಸಿರಬೇಕು. ಮತ್ತು ಗರಿಷ್ಠ ವಯಸ್ಸು 30 ವರ್ಷದೊಳಗೆ ಇರಬೇಕು.

ವಯೋಮಿತಿ ಸಡಿಲಿಕೆ:
ಹಿಂದುಳಿದ (ಒಬಿಸಿ) ಅಭ್ಯರ್ಥಿಗಳಿಗೆ: 03 ವರ್ಷ
SC/ ST ಮತ್ತು ಪ್ರವರ್ಗ-I ರ ಅಭ್ಯರ್ಥಿಗಳಿಗೆ: 05 ವರ್ಷ
ಪಿಡಬ್ಲ್ಯೂಡಿ (PWD) ಅಭ್ಯರ್ಥಿಗಳಿಗೆ: 10 ವರ್ಷ

ವೇತನ ಶ್ರೇಣಿ ವಿವರ:
ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 22,405 ರಿಂದ 62,265 ರೂಪಾಯಿ ಸಂಬಳವನ್ನು ನೀಡಲಾಗುತ್ತದೆ.

ಆಯ್ಕೆ ವಿಧಾನ:
ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್‌ಲೈನ್‌ ಪ್ರಿಲಿಮಿನರಿ ಪರೀಕ್ಷೆ (ಮುಖ್ಯ ಪರೀಕ್ಷೆ) ಮತ್ತು ಮುಖ್ಯ ಪರೀಕ್ಷೆ ಮೂಲಕ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ.

ಪರೀಕ್ಷಾ ಕೇಂದ್ರಗಳು:
ಪ್ರಿಲಿಮಿನರಿ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಹುಬ್ಬಳ್ಳಿ/ಧಾರವಾಡ, ಮಂಗಳೂರು, ಮೈಸೂರು
ಮುಖ್ಯ ಪರೀಕ್ಷಾ ಕೇಂದ್ರಗಳು: ಬೆಂಗಳೂರು

ನೇಮಕಾತಿ ಶುಲ್ಕ :
SC/ST, ಪಿಡಬ್ಲ್ಯೂಡಿ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು: 100 ರೂ.
ಇನ್ನುಳಿದ ಅಭ್ಯರ್ಥಿಗಳು: 850 ರೂ.

ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್‌

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: ಅಕ್ಟೋಬರ್ 24, 2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : ನವೆಂಬರ್ 11, 2024

ಪರೀಕ್ಷಾ ದಿನಾಂಕಗಳು:
ಆನ್‌ಲೈನ್‌ ಪರೀಕ್ಷೆ Phase l ದಿನಾಂಕ: ನವೆಂಬರ್ 30, 2024
ಆನ್‌ಲೈನ್‌ ಪರೀಕ್ಷೆ Phase ll ದಿನಾಂಕ: ಡಿಸೆಂಬರ್ 28, 2024

IIPM ಬೆಂಗಳೂರು ನಲ್ಲಿ ಪ್ರೊಫೆಸರ್ ಹುದ್ದೆಗಳ ನೇಮಕಾತಿ 2024

National Insurance Company Limited Recruitment 2024 ಅಧಿಸೂಚನೆ ಲಿಂಕ್‌ಗಳು:

Official NotificationClick Here
Apply OnlineClick Here
Official Websitenationalinsurance.nic.co.in

Leave a Comment