ಅಂಗನವಾಡಿ ಟೀಚರ್ ನೇಮಕಾತಿ SSLC, PUC ಪಾಸಾದವರು ಅರ್ಜಿ ಸಲ್ಲಿಸಿ | WCD Chamarajanagar Recruitment 2024

WhatsApp Group Join Now
Telegram Group Join Now

WCD Chamarajanagar Recruitment 2024: ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಾಮರಾಜನಗರ ಜಿಲ್ಲಾಧ್ಯಾಂತ ಇರುವ ವಿವಿಧ ಗ್ರಾಮ ಪಂಚಾಯತ್ ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯವಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು (Anganwadi Worker & Helper) ಪೋಸ್ಟ್ ಗಳನ್ನು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ನೇಮಕ ಮಾಡಲು ಆನ್‌ಲೈನ್‌ ಮೂಲಕ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಾಮರಾಜನಗರ (WCD Chamarajanagar) ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಹುದ್ದೆ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ವೇತನ, ವಯಸ್ಸಿನ ಮೀತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲಾ ಮಾಹಿತಿಯನ್ನು ಕೆಳಗೆ ಇಲ್ಲಿದೆ.

WCD Chamarajanagar Recruitment 2024 ಸಂಕ್ಷಿಪ್ತ ವಿವರ:

ಇಲಾಖೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಾಮರಾಜನಗರ
ಹುದ್ದೆ: ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು
ಖಾಲಿ ಹುದ್ದೆಗಳ ಸಂಖ್ಯೆ: 207
ಕರ್ತವ್ಯದ ಸ್ಥಳ: ಚಾಮರಾಜನಗರ (ಕರ್ನಾಟಕ)

ಖಾಲಿ ಇರುವ ಹುದ್ದೆಗಳ ವಿವರ:
ಅಂಗನವಾಡಿ ಕಾರ್ಯಕರ್ತೆಯರು: 80
ಅಂಗನವಾಡಿ ಸಹಾಯಕಿಯರು: 127

ಶೈಕ್ಷಣಿಕ ಅರ್ಹತೆ :
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೇಮಕಾತಿ

ಪ್ರಕಾರ ಅಭ್ಯರ್ಥಿಗಳು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಯಾವುದೇ ಶಿಕ್ಷಣ ಸಂಸ್ಥೆಯಿಂದ ದ್ವೀತಿಯ ಪಿಯುಸಿ (PUC) ಪಾಸಾಗಿರಬೇಕು. ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವ
ಅಭ್ಯರ್ಥಿಗಳು ಯಾವುದೇ ಸಂಸ್ಥೆಯಿಂದ ಹತ್ತನೇ ತರಗತಿಯ (SSLC) ಅಥವಾ ತತ್ಸಮಾನ ವಿದ್ಯಾರ್ಹತೆ ಉತ್ತೀರ್ಣರಾಗಿರಬೇಕು.

ವಯೋಮಿತಿ:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (WCD) ಚಾಮರಾಜನಗರ ಹೊರಡಿಸಿರುವ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅರ್ಜಿದಾರರ ಕನಿಷ್ಠ ವಯೋಮಿತಿ 19 ವರ್ಷ ಆಗಿರಬೇಕು. ಹಾಗೂ ಗರಿಷ್ಠ ವಯಸ್ಸು 35 ವರ್ಷವನ್ನು ಮೀರಿರಬಾರದು.

ವಯೋಮಿತಿ ಸಡಿಲಿಕೆ:
ವಿಕಲಚೇತನ ಅಭ್ಯರ್ಥಿಗಳಿಗೆ: 10 ವರ್ಷ

ನೇಮಕಾತಿ ಶುಲ್ಕ:
ಇತರ ಎಲ್ಲಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಆಯ್ಕೆ ವಿಧಾನ:
ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳನ್ನು ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳನ್ನು ಆಧರಿಸಿ ಕ್ರೂಡೀಕೃತ ಮೆರಿಟ್ ಪಟ್ಟಿಯನ್ನು ತಯಾರಿಸಿ ಅರ್ಹ ಅಭ್ಯರ್ಥಿಗಳನ್ನು ಮೂಲ ದಾಖಲೆಗಳ ಪರಿಶೀಲಿಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :

  1. 10ನೇ ತರಗತಿ ಅಂಕಪಟ್ಟಿ.
  2. ಹುದ್ದೆಗೆ ಅನ್ವಯಿಸುವ ವಿದ್ಯಾರ್ಹತೆ ಅಂಕಪಟ್ಟಿ.
  3. 3 ವರ್ಷದ ವಾಸಸ್ಥಳ ದೃಢೀಕರಣ ಪತ್ರ.
  4. ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ.
  5. ವಿಧವಾ ಅಭ್ಯರ್ಥಿಗಳು ಪತಿಯ ಮರಣ ಪ್ರಮಾಣ ಪತ್ರ ಹಾಗೂ ವಿಧವಾ ಪ್ರಮಾಣ ಪತ್ರ (ವಿಧವಾ ವೇತನದ ದೃಢಿಕರಣವನ್ನು ಪರಿಗಣಿಸುವಂತಿಲ್ಲ)
  6. ಅಂಗವಿಕಲರಿಗೆ ಮಾತ್ರ ವಿಕಲಚೇತನ ಪ್ರಮಾಣಪತ್ರ (ಅಂಗವಿಕಲ ವೇತನದ ದೃಢೀಕರಣವನ್ನು ಪರಿಗಣಿಸುವಂತಿಲ್ಲ)
  7. ವಿಚ್ಛೇದನ ಪ್ರಮಾಣ ಪತ್ರ (ನ್ಯಾಯಾಲಯದಿಂದ ಪಡೆದಿರಬೇಕು)

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 01/11/2024
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ನವೆಂಬರ್ 27, 2024

WCD Chamarajanagar Recruitment 2024 ಅಧಿಸೂಚನೆ ಲಿಂಕ್‌ಗಳು:

Official NotificationClick Here
Apply OnlineClick Here
Official Websitekarnemakaone.kar.nic.in
WhatsApp Group Join Now
Telegram Group Join Now

Leave a Comment