bele parihara karnataka 2023-24: ನಿಮ್ಮೇಲ್ಲರಿಗೂ ನಮಸ್ಕಾರ ರೈತರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಎಲ್ಲರಿಗೂ ತಿಳಿದಿರುವಂತೆ ರಾಜ್ಯ ಸರ್ಕಾರವು ಕಳೆದ ವರ್ಷದ (ಬೆಳೆ ಪರಿಹಾರ ಹಣ ಸಂದಾಯ ವರದಿ 2023) ಮುಂಗಾರು ಹಂಗಾಮಿನ ಬೆಳೆ ಹಾನಿಯಾಗಿ ನಷ್ಟ ಅನುಭವಿಸಿದ ಅರ್ಹ ರೈತರಿಗೆ ಬೆಳೆ ಪರಿಹಾರ ಮೂರನೇ ಕಂಚಿನ ಹಣವನ್ನು ಖಾತೆಗೆ ಜಮಾ ಮಾಡಲಾಗಿದೆ.
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ 18,ಸಾವಿರ ಕೋಟಿ ಅನುದಾನ ಬೇಡಿಕೆಯನ್ನು ಇಡಲಾಗಿತ್ತು. ಆದರೆ ಕೇಂದ್ರ ಸರ್ಕಾರ ಮಾತ್ರ 3,454 ಕೋಟಿ ರೂ. ಅನ್ನು ಬಿಡುಗಡೆ ಮಾಡಿದೆ. ಕೇಂದ್ರದಿಂದ ಬಂದ ಹಣವನ್ನು ರಾಜ್ಯ ಸರ್ಕಾರ ಈಗಾಗಲೇ ಎರಡು ಕಂತುಗಳಲ್ಲಿ ಬೆಳೆ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗಿದೆ. ಈಗ ಮತ್ತೆ ಜುಲೈ 11 ರಂದು 3ನೇ ಕಂತಿನ ಹಣವನ್ನು ಪ್ರತಿಯೊಬ್ಬ ಅರ್ಹ ರೈತರ ಖಾತೆಗೆ ನೇರವಾಗಿ ಜಮಾ ಮಾಡಿದೆ.
ಸರ್ಕಾರ ಈವರೆಗೆ ಯಾವ ರೈತರ ಖಾತೆಗೆ ಎಷ್ಟು ಬೆಳೆ ಪರಿಹಾರ ಹಣ ಜಮಾ ಆಗಿದೆ ಫಲಾನುಭವಿಗಳ ಪಟ್ಟಿ (bele parihara list)ಯನ್ನು ಬಿಡುಗಡೆ ಮಾಡಿದೆ. ಆ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವಾ ಎಂಬುದನ್ನು ಪರಿಶೀಲನೆ ಮಾಡುವುದು ಹೇಗೆ ಎಂಬುದನ್ನು ಈ ಕೆಳಗಿನಂತೆ ನೋಡೋಣ.
ಬೆಳೆ ಪರಿಹಾರ ಪೇಮೆಂಟ್ ಪಟ್ಟಿ ಚೆಕ್ ಮಾಡುವುದು ವಿಧಾನ?
ಹಂತ -1: ಮೊದಲು ನೀಡಲಾಗಿರುವ ರಾಜ್ಯ ಸರಕಾರದ ಅಧಿಕೃತ ಜಾಲತಾಣದ parihara.karnataka.gov.in ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ -2: ಇನ್ ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯ ಪುಟ್ಟ ಒಪನ್ ಆಗುತ್ತದೆ. ಅಲ್ಲಿ ಇರುವ 2023-24 ವರ್ಷ ವನ್ನು ಆಯ್ಕೆ ಮಾಡಿ.
ಹಂತ-3: ಮುಂಗಾರು ಋತು ಆಯ್ಕೆ ಮಾಡಿಕೊಳ್ಳಿ.
ಹಂತ-4: ನಂತರದಲ್ಲಿ ವಿಪತ್ತಿನ ವಿಧದಲ ಬರ ಆಯ್ಕೆ ಮಾಡಿಕೊಂಡು.
ಹಂತ-5:ನಂತರ ನಿಮ್ಮ ಜಿಲ್ಲೆ ಹೆಸರು, ತಾಲ್ಲೂಕು, ಹೋಬಳಿ ಹಾಗೂ ಹಳ್ಳಿ ಹೆಸರನ್ನು ನಮೂದಿಸಿ.
ಹಂತ-6: ಕೊನೆಯದಾಗಿ ವರದಿ ಪಡೆಯಿರಿ (Get Report) ಅನ್ನು ಕ್ಲಿಕ್ ಮಾಡಿ.
ಹಂತ -7: ಯಾವ ರೈತರಿಗೆ ಎಷ್ಟು ಬರ ಪರಿಹಾರ ಹಣ ಜಮಾ ಆಗಿದೆ ಫಲಾನುಭವಿಗಳ ಹೆಸರು ಕಾಣಿಸುತ್ತದೆ. ಅಲ್ಲಿ ನಿಮ್ಮ ಹೆಸರು ಮತ್ತು ಹಣ ಚೆಕ್ ಮಾಡಿ.
ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಏನು ಮಾಡುವುದು?
ರೈತ ಮಿತ್ರರೇ, ಮೇಲಿನ ಪಟ್ಟಿಯಲ್ಲಿ ನಿಮ್ಮ ಹೆಸರು ಹಾಗೂ ಹಣ ಜಮಾ ಆಗದ ಇದ್ದರೆ ನೀವು ನಿಮ್ಮ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ನಿಮ್ಮ ಬರ ಪರಿಹಾರ ಹಣದ ಬಗ್ಗೆ ನಿಚಾರಿಸಬಹುದು.