Ration Card Approval Status check: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಈ ಒಂದು ಲೇಖನದಲ್ಲಿ ನಮ್ಮೆಲ್ಲರಿಗೂ ತಿಳಿಸುವುದೇನೆಂದರೆ ನೀವು ಸಹ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದೀರಾ ನಿಮ್ಮ ರೇಷನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿ, ಸದಸ್ಯರ ಹೆಸರು ಬದಲಾವಣೆ ಅಥವಾ ನಿಮ್ಮ ವಿಳಾಸದ ಬದಲಾವಣೆ ಮಾಡಿದ್ದಿರಾ ಹಾಗಾದ್ರೆ ಇಲ್ಲಿದೆ ನಿಮ್ಮಗೆ ಸಿಹಿ ಸುದ್ದಿ..! ಇದೀಗ ಆಹಾರ ಇಲಾಖೆಯಿಂದ ರೇಷನ್ ಕಾರ್ಡ್ ಸ್ಥಿತಿ ನೋಡಲು(Ration Card Approval Status check ) ಪ್ರಾರಂಭವಾಗಿದ್ದು ಹಾಗಾದರೆ ನೀವು ನಿಮ್ಮ ಮೊಬೈಲ್ ನಲ್ಲಿ ಯಾವ ರೀತಿ ಚೆಕ್ ಮಾಡಬೇಕು ಎನ್ನುವರು ಈ ಕೆಳಗಿನ ಮಾಹಿತಿಯನ್ನು ಸಂಪೂರ್ಣ ಓದಿ.
ಸ್ನೇಹಿತರೆ, ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕರ್ನಾಟಕ ರಾಜ್ಯ ಸರ್ಕಾರ ಹೊಸ ರೇಷನ್ ಕಾರ್ಡ್ ಅಪ್ಲಾಯ್ ಮತ್ತು ರೇಷನ್ ಕಾರ್ಡ್ ನಲ್ಲಿ ಸದಸ್ಯರ ಹೆಸರು ಬದಲಾವಣೆ ಹಾಗೂ ವಿಳಾಸದ ಬದಲಾವಣೆಗೆ ಮತ್ತು ರೇಷನ್ ಕಾರ್ಡ್ ನಲ್ಲಿ ಇತರ ತಿದ್ದುಪಡಿ ಮಾಡಲು ಆಹಾರ ಇಲಾಖೆಯು ಜುಲೈ 6 ರಿಂದ ಜುಲೈ 20 ರವರೆಗೆ ರೇಷನ್ ಕಾರ್ಡಿನಲ್ಲಿ ಹೆಸರು ಸೇರ್ಪಡೆ ಮತ್ತು ತಿದ್ದುಪಡಿಗೆ ಅವಕಾಶವನ್ನು ನೀಡಿರುತ್ತದೆ.
ಇನ್ನೂ ಯಾರಾದರೂ ಹೆಸರು ತಿದ್ದುಪಡಿ, ವಿಳಾಸದ ಬದಲಾವಣೆ ಮಾಡ ಬಯಸುವವರು ಜುಲೈ 20 ರವರೆಗೆ ಅವಕಾಶ ಇರುತ್ತದೆ. ಹಾಗಾದರೆ ಇದನ್ನು ಮಾಡಿಸಲು ನಿಮ್ಮ ಹತ್ತಿರದ CSC ಕೇಂದ್ರಗಳಿಗೆ, ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಗೆ ಭೇಟಿ ನೀಡಿ ತಿದ್ದುಪಡಿ ಮಾಡಬಹುದು.
ರೇಷನ್ ಕಾರ್ಡ್ ಸ್ಟೇಟ್ಸ್ (Ration Card approval) ಚೆಕ್ ಮಾಡುವುದು ಹೇಗೆ ?
ಹೌದು ಸ್ನೇಹಿತರೆ ನೀವು ನಿಮ್ಮ ರೇಷನ್ ಕಾರ್ಡ್ ಹೆಸರು ಸೇರ್ಪಡೆ ಆಗಿದೆ ಅಥವಾ ಇತರ ಯಾವುದಾದರೂ ತಿದ್ದುಪಡಿ ಆಗಿದೆ ಎಂದು ಸ್ಟೇಟ್ಸ್ ಚೆಕ್ ಮಾಡಲು ನೀವು ಕೆಳಗೆ ನೀಡಿರುವ ಆಹಾರ ಇಲಾಖೆ ವೆಬ್‌ಸೈಟ್ ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ ಲಿಂಕನ್ ಮೇಲೆ ಕ್ಲಿಕ್ ಮಾಡಿ.
ಕೆಳಗೆ ನೀಡಿರುವ ಲಿಂಕಿನ್ ಮೇಲೆ ಕ್ಲಿಕ್ ಮಾಡಿದ ನಂತರ ಆಹಾರ ಇಲಾಖೆ ವೆಬ್ ಸೈಟಿಗೆ ahara.kar.nic.in ಭೇಟಿ ನೀಡುತ್ತಿರಾ ನಂತರ ಅಲ್ಲಿ ಸ್ಟೇಟಸ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದ ನಂತರ.
ನಂತರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಪುಟ್ಟಕ್ಕೆ ಪ್ರವೇಶ ನೀಡುತ್ತಿರ ನಂತರ ನಿಮಗೆ ಮೂರು ಲಿಂಕ್‌ಗಳು ಕಾಣುತ್ತವೆ ಅಲ್ಲಿರುವ ನಿಮ್ಮ ಜಿಲ್ಲೆ ಹೆಸರಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಂತರ ನಿಮಗೆ ಇಲ್ಲಿ ಪಡಿತರ ಚೀಟಿಯ ಬದಲಾವಣೆ ಕೋರಿಕೆ ಸ್ಥಿತಿ (Ration Card Amendment Requests Status) ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಎಂಟರ್ ಮಾಡಿ.
ನಿಮ್ಮ ರೇಷನ್ ಕಾರ್ಡ್ ನಂಬರ್ ಎಂಟರ್ ಮಾಡಿದ ಮೇಲೆ ಗೋ (Go) ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಪಟ್ಟಕ್ಕೆ ಭೇಟಿ ನೀಡುತ್ತಿರಾ ನಿಮ್ಮ ರೇಷನ್ ಕಾರ್ಡ್ ಆಗಿದೆಯಾ ಅಥವಾ ಇಲ್ಲಾ ಎಂದು ಮೇಲೆ ನಿಮ್ಮ ಸ್ಟೇಟ್ಸ್ ಕಾಣಿಸುತ್ತದೆ. ಈ ರೀತಿಯಾಗಿ ನಿಮ್ಮ ಮೊಬೈಲ್ ನಲ್ಲಿ ರೇಷನ್ ಕಾರ್ಡ್ ತಿದ್ದುಪಡಿಯ ಅಪ್ರೂವಲ್ ಸ್ಥಿತಿ ಚೆಕ್ ಮಾಡಬಹುದು.
ಪ್ರಮುಖ ಲಿಂಕ್‌ಗಳು:
ರೇಷನ್ ಕಾರ್ಡ್ ಸ್ಟೇಟ್ಸ್ ಚೇಕ್ ಮಾಡಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ ವಿಳಾಸ: ahara.kar.nic.in