ಅನ್ನ ಭಾಗ್ಯ ಯೋಜನೆಯ ಹಣ ಬಂತಾ ನಿಮ್ಮಗೂ DBT Status ನೋಡಲು ಡೈರೆಕ್ಟ್ ಲಿಂಕ್‌ Anna Bhagya Installment DBT Status

Anna Bhagya Installment DBT Status: ನಮಸ್ಕಾರ ಕರ್ನಾಟಕದ ಜನತೆಗೆ ರಾಜ್ಯ ಸರ್ಕಾರದ ಐದು ಯೋಜನೆಗಳು ಜಾರಿಯಲ್ಲಿದ್ದು ಅದರಲ್ಲಿ ಒಂದಾದ ಅನ್ನ ಭಾಗ್ಯ ಯೋಜನೆಯಡಿ ಕರ್ನಾಟಕ ಸರ್ಕಾರ (BPL) ರೇಷನ ಕಾರ್ಡ್ ಫಲಾನುಭವಿಗಳಿಗೆ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನು ನೀಡುತ್ತಿದೆ. ಸದ್ಯಕ್ಕೆ ಅಕ್ಕಿಯ ಕೊರತೆಯಿಂದಾಗಿ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. ಸರ್ಕಾರ ಉಳಿದ 5 ಕೆಜಿ ಅಕ್ಕಿ ಬದಲಿಗೆ ಜುಲೈ 2023 ರಿಂದ ರೇಷನ ಕಾರ್ಡ್ ಮುಖ್ಯಸ್ಥರ ಖಾತೆಗೆ ಹಣವನ್ನು (ಡಿಬಿಟಿ) ಮೂಲಕ ಪ್ರತಿ ಕೆಜಿಗೆ 34 ರೂ.ಗಳನ್ನು ನೀಡಲಾಗುತ್ತಿದೆ. ಜುಲೈ 2024 ರವರೆಗೆ ಕರ್ನಾಟಕ ಸರ್ಕಾರವು ಒಟ್ಟು 11 ಕಂತುಗಳ ಹಣವನ್ನು ನೀಡಲಾಗಿದೆ.

ಅನ್ನಭಾಗ್ಯ ಡಿಬಿಟಿ ಸ್ಟೇಟ್ಸ್:
ಅನ್ನ ಭಾಗ್ಯ ಯೋಜನೆಯ ಹಣ ಹಲವು ದಿನಗಳಿಂದ ಏಕೆ ಬಿಡುಗಡೆಯಾಗಿಲ್ಲ ಎಂದು ಎಲ್ಲಾ ನಾಗರಿಕರಲ್ಲಿ ಗೊಂದಲ ಮತ್ತು ಆತಂಕಕ್ಕೆ ಕಾರಣವಾಗಿತ್ತು. ಕಾರಣ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ನಡೆಯುತ್ತಿರುವ ತಾಂತ್ರಿಕ ಕಾಮಗಾರಿಯಿಂದಾಗಿ ಸ್ವಲ್ಪ ತಡವಾಗಿದೆ.

ಕೊನೆಗೂ ಸರ್ಕಾರ ಜನತೆಗೆ ಗುಡ್ ನ್ಯೂಸ್ ನೀಡಿದೆ. 20-07-2024 ರಂದು, ಸರ್ಕಾರವು ಅನ್ನ ಭಾಗ್ಯ ಯೋಜನೆಯ 11ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ, ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಈ ಕೆಳಗೆ ನೀಡಿರುವ ವಿಧಾನದ ahara.kar.nic.in ಮೂಲಕ ನಿಮ್ಮ ಅನ್ನ ಭಾಗ್ಯ ಯೋಜನೆಯ 11ನೇ ಕಂತಿನ DBT ಸ್ಟೇಟ್ಸ್ ಚೇಕ್ ಮಾಡಬಹುದು.

ಅನ್ನ ಭಾಗ್ಯ DBT ಸ್ಟೇಟ್ಸ್ ಚೇಕ್ ಮಾಡುವುದು ಹೇಗೆ:

ಕೆಳಗೆ ನೀಡಲಾದ ಮಾಹಿತಿ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ನೀವು ಮೂಲಕ ಅನ್ನ ಭಾಗ್ಯ 11 ನೇ ಕಂತಿನ DBT ಸ್ಟೇಟ್ಸ್ ಚೇಕ್ ಮಾಡುವುದು.

ಹಂತ-01: ನೀವು ಅನ್ನ ಭಾಗ್ಯ ಡಿಬಿಟಿ ಸ್ಟೇಟ್ಸ್ ಪರಿಶೀಲಿಸಲು ಆಹಾರ ಇಲಾಖೆ ವೆಬ್‌ಸೈಟ್ ahara.kar.nic.in ಗೆ ಭೇಟಿ ನೀಡಿ. ಡೈರೆಕ್ಟ್ ಲಿಂಕ್‌ ಕೆಳಗೆ ನೀಡಲಾಗಿದೆ.

ಹಂತ-02: ಆಹಾರ ಇಲಾಖೆ ಮುಖ್ಯ ಪುಟ್ಟ ತೆರದ ನಂತರ ಅಲ್ಲಿ ನೀಡಲಾಗಿರುವ ನಿಮ್ಮ ಜಿಲ್ಲೆ ಹೆಸರಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹಂತ-03: ನಂತರ ನಿಮ್ಮ ಮುಂದೆ ವಿವಿಧ ಆಯ್ಕೆಗಳು ಕಾಣುತ್ತವೆ. ಕೊನೆಯ ಆಯ್ಕೆ ಇರುವ ನೇರ ನಗದು ವರ್ಗಾವಣೆಯ ಸ್ಥಿತಿ (Status of DBT) ಲಿಂಕ್‌ ಮೇಲೆ ಕ್ಲಿಕ್ ಮಾಡಿ.

ಹಂತ-04 : ಅನ್ನ ಭಾಗ್ಯ DBT ಸ್ಥಿತಿ ನಂತರ ಪುಟ್ಟ ತೆರದ ಬಳಿಕ ಅಲ್ಲಿ ಇರುವ ವರ್ಷ (2024) ಮತ್ತು ತಿಂಗಳನ್ನು ಆಯ್ಕೆಮಾಡಿ. ಫಲಾನುಭವಿಗಳ ರೇಷನ್ ಕಾರ್ಡ್ ಸಂಖ್ಯೆ ಮತ್ತು ಕ್ಯಾಪ್ಚಾವನ್ನು ಭರ್ತಿ ಮಾಡಿ, ನಂತರ “Go” ಬಟನ್ ಕ್ಲಿಕ್ ಮಾಡಿ.

ಹಂತ-05: ಅದಾದನಂತರ ಕುಟುಂಬದ ಮುಖ್ಯಸ್ಥರ ಹೆಸರು, ಅವರ ಆಧಾರ ಸಂಖ್ಯೆಯ ಕೊನೆಯ 4 ನಂಬರ್‌ ನಿಮ್ಮ ಕುಟುಂಬ ಒಟ್ಟು ಸದಸ್ಯರ ಸಂಖ್ಯೆ ಅಕ್ಕಿ ಪ್ರಮಾಣ ಹಾಗೂ ಫಲಾನುಭವಿಗಳ ಖಾತೆಗೆ ಜಮಾ ಆಗಿರುವ ಹಣದ ವಿವರಗಳನ್ನು ಅಲ್ಲಿ ನೀವು ನೋಡಬಹುದು.

ಅನ್ನ ಭಾಗ್ಯ DBT ನೋಡಲು ಡೈರೆಕ್ಟ್ ಲಿಂಕ್‌: ಇಲ್ಲಿ ಕ್ಲಿಕ್ ಮಾಡಿ

  1. ಬೆಳೆ ಪರಿಹಾರ: ರೈತರ ಖಾತೆಗೆ 3 ಸಾವಿರ ರೂ. ಜಮಾ ನಿಮಗೂ ಬಂತಾ ನೋಡಿ 
  2. ರೇಷನ್ ಕಾರ್ಡ್: ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್..! ನಿಮ್ಮ ರೇಷನ್ ಕಾರ್ಡ್ ಸ್ಟೇಟ್ಸ್ ಈ ರೀತಿ ಚೆಕ್ ಮಾಡಿ
  3. ಗೃಹಲಕ್ಷ್ಮಿ 4 ಸಾವಿರ ರೂ. ಜಮಾ ಮಾಡಲಾಗಿದೆ ! ನೀವು ಈ ರೀತಿ ಚೆಕ್ ಮಾಡಿ 

Leave a Comment