Cattle Shed Mgnrega Subsidy: ನಮಸ್ಕಾರ ರೈತ ಮಿತ್ರರೇ ನಮ್ಮ ಮತ್ತೊಂದು ಹೊಸ ಲೇಖನದಲ್ಲಿ ಸ್ವಾಗತ ಈ ಮೂಲಕ ನಿಮ್ಮೆಲ್ಲರಿಗೂ ತಿಳಿಸುವುದೇಂದರೆ, ಕರ್ನಾಟಕ ಸರ್ಕಾರದ ವತಿಯಿಂದ ಎಲ್ಲ ರೈತರಿಗೆ ದನದ ಕೊಟ್ಟಿಗೆ ಅಥವಾ ಶೆಡ್ ನಿರ್ಮಾಣಕ್ಕೆ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಮೂಲಕ ರೈತರು ಹೈನುಗಾರಿಕೆ ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡು ಜಾನುವಾರು ಸಾಕಾಣಿಕೆ ಲಾಭ ಪಡೆಯಬಹುದು. ನೀವು ಸಹ ಈ ಯೋಜನೆಗೆ ಲಾಭ ಪಡೆಯ ಬಯಸಿದರೆ ಲೇಖನವನ್ನು ಕೊನೆಯವರೆಗೂ ಓದಿರಿ.
ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅಡಿಯಲ್ಲಿ (mgnrega pashu shed yojana) ಒಂದು ಅರ್ಹ ಕುಟುಂಬವು ಜೀವಿತಾವಧಿಯಲ್ಲಿ ಐದು ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಕಾಮಗಾರಿಯನ್ನು ಮಾಡಲು ಈ ಸೌಲಭ್ಯವನ್ನು ಕಲ್ಪಿಸಲಾಗಿದೆ. ಒಂದು ಅವಕಾಶವನ್ನು ಅರ್ಹ ಫಲಾನುಭವಿಗಳು ಬಳಸಿಕೊಂಡು ಇದರ ಸಹಾಯಧನ ಪಡೆದುಕೊಳ್ಳಬಹುದು.
ಈ ಸಹಾಯಧನದಿಂದ ನೀವು ಹಸು, ಕುರಿ, ಮೇಕೆ, ಕೋಳಿ ಮತ್ತು ಹಂದಿ ಸಾಕಾಣಿಕೆಯನ್ನು ಮಾಡಲು ಬಯಸಿದರೆ ಕೂಡ ಈ ಯೋಜನೆಯಡಿ ಮೂಲಕ ಸಹಾಯಧನವನ್ನು ಬಳಸಿಕೊಂಡು ವೈಯಕ್ತಿಕ ಕಾಮಗಾರಿ, ಕೃಷಿ ಹೊಂಡ, ತೋಟಗಾರಿಕೆ ಬೆಳೆ, ರೇಷ್ಮೆ ಹಾಗೂ ಅರಣ್ಯ ಬೆಳೆಗಳು ಸೇರಿದಂತೆ ಇತರೆ ವೈಯಕ್ತಿಕ ಕಾಮಗಾರಿ ಪಡೆಯಬಹುದು ನಿಮ್ಮ ಆದಾಯವನ್ನು ದುಪ್ಪಟ್ಟು ಆದಾಯ ಪಡೆಯಬಹುದು.
ಮೊದಲು ಈ ಯೋಜನೆಯಡಿ ಶೇಡ್ ಅಥವಾ ಕೊಟ್ಟಿಗೆ ನಿರ್ಮಾಣಕ್ಕೆ ಸಾಮಾನ್ಯ ವರ್ಗದ ರೈತರಿಗೆ ರೂ. 19,500 ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗಗಳ ರೈತರಿಗೆ ರೂ. 43000 ರವರೆಗೆ ಸಹಾಯಧನ ನೀಡಲಾಗುತ್ತಿತ್ತು. ಆದರೆ ಈಗ ಪರಿಸ್ಕೃತ ಆದೇಶದಂತೆ ಎಲ್ಲರಿಗೂ ಸಮಾನವಾಗಿ ರೂ. 57,000 ಸಹಾಯಧನ ಪಡೆಯಬಹುದು.
ಈ ಯೋಜನೆಯ ಅಡಿಯಲ್ಲಿ ಸರ್ಕಾರದಿಂದ ರೂ. 57,000 ಸಬ್ಸಿಡಿ ಹಣವನ್ನು ನೀಡುತ್ತಿದ್ದು, ಅದರಲ್ಲಿ 10,556 ರೂ. ಕೂಲಿ ಹಣವನ್ನು ನೀಡಲಾಗುತ್ತದೆ. ಇನ್ನುಳಿದ ರೂ 46,644 ಸಹಾಯಧನದಲ್ಲಿ ಹಸು ಕೊಟ್ಟಿಗೆ ನಿರ್ಮಾಣಕ್ಕೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಗೆ ಮತ್ತು ನಿರ್ಮಾಣ ವೆಚ್ಚಕ್ಕೆ ಬಳಸಿಕೊಳ್ಳಬಹುದು.
ಅರ್ಜಿ ಸಲ್ಲಿಸುವ ವಿಧಾನ:
ಈ ಯೋಜನೆಯ ಲಾಭವನ್ನು ಪಡೆಯಲು ಬಹು ಮುಖ್ಯವಾಗಿ ಅರ್ಜಿದಾರರು18 ವರ್ಷ ಪೂರೈಸಿರಬೇಕು. ಜೊತೆಗೆ ಜಾಬ್ ಕಾರ್ಡ್ ಕಡ್ಡಾಯವಾಗಿ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರು. ಜಾಬ್ ಕಾರ್ಡ್ ಹೊಂದಿರುವ ರೈತರು 4ಕ್ಕಿಂತ ಹೆಚ್ಚು ಹಸುಗಳನ್ನು ಸಾಕಾಣಿಕೆ ಮಾಡುತ್ತಿದ್ದರೆ ಶೇಡ್ ನಿರ್ಮಾಣಕ್ಕೆ ಸಹಾಯಧನ ಸೌಲಭ್ಯಕ್ಕೆ ಪಡೆಯಲು ಅರ್ಹರಾಗಿರುತ್ತಾರೆ. ಅಂತವರು ನಿಮ್ಮ ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ಜಾನುವಾರು ಇರುವ ಕುರಿತು ದೃಢೀಕೃತ ಪ್ರಮಾಣ ಪತ್ರ ಪಡೆದ, ನಂತರ ಅರ್ಜಿ ಸಲ್ಲಿಸಲು ನಿಮ್ಮ ಗ್ರಾಮದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡಿ ಈ ಯೋಜನೆಯ ಸಬ್ಸಿಡಿ ಹಣ ಪಡೆಯಲು ಅರ್ಜಿ ಸಲ್ಲಿಸಬಹುದು.