ಇ-ಶ್ರಮ ಕಾರ್ಡ್ ಫಲಾನುಭವಿಗಳಿಗೆ ಪ್ರತಿ ತಿಂಗಳು 1,000 ರೂ. ಖಾತೆಗೆ ಏನಿದು ಯೋಜನೆ ? E Shram card Application

E shram card application: ನಮಸ್ಕಾರ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ನಿಮಗೆಲ್ಲರಿಗೂ ತಿಳಿಸುವುದೇಂದರೆ, ಇ-ಶ್ರಮ್ ಕಾರ್ಡ್ ಹೊಂದಿರುವ ಹಾಗೂ ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಕಾರ್ಮಿಕರಿಗೆ ಕೇಂದ್ರ ಸರ್ಕಾರವು ಮಾಸಿಕ 1000 ರೂ. ಭತ್ಯೆಯನ್ನು ಪಡೆಯಬಹುದು. ರಾಜ್ಯದ ಎಲ್ಲಾ ಅಸಂಘಟಿತ ವರ್ಗದ ಕಾರ್ಮಿಕರಿಗೆ ಸಾಮಾಜಿಕ ಆರ್ಥಿಕ ಭದ್ರತೆ ಒದಗಿಸುವುದಕ್ಕಾಗಿ ಇ-ಶ್ರಮ ಕಾರ್ಡ್ ಯೋಜನೆ ನೋಂದಣಿ ಆರಂಭಿಸಲಾಗಿದೆ. ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನ ಕೊನೆವರೆಗೂ ಓದಿ.

ಏನಿದು ಯೋಜನೆ ?
ಇ-ಶ್ರಮ್ ಕಾರ್ಡ್ (E Shram Card) ಯೋಜನೆಗೆ ಅರ್ಜಿ ಸಲ್ಲಿಸಿದ 16 ರಿಂದ 59 ವರ್ಷದೊಳಗಿನ ಫಲಾನುಭವಿಗಳಿಗೆ ಈ ಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿ ತಿಂಗಳು 1000 ಮತ್ತು ಇದರ ಹೊರತಾಗಿ 2 ಲಕ್ಷ ರೂ.ಗಳ ಅಪಘಾತ ವಿಮೆಯನ್ನು ಸಹ ಒದಗಿಸುತ್ತದೆ.

ಇ-ಶ್ರಮ್ ಕಾರ್ಡ್ ಯೋಜನೆ ಉದ್ದೇಶ ?
ಕೇಂದ್ರ ಸರ್ಕಾರ ಇ-ಶ್ರಮ್ ಕಾರ್ಡ್ ಯೋಜನೆಯನ್ನು ಪ್ರಾರಂಭಿಸುವ ಮುಖ್ಯ ಉದ್ದೇಶ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಬಡ ಜನರಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಫಲಾನುಭವಿಗಳ ಜೀವನಮಟ್ಟವನ್ನು ಸುಧಾರಿಸುವುದಾಗಿದೆ. ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 1000 ರೂ. ಧನಸಹಾಯ ನೀಡುವ ಮೂಲಕ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಬಡ ಜನರಿಗೆ ಸಹಾಯ ನೀಡುವ ಮೂಲಕ ಸಾರ್ವಜನಿಕರು ತಮ್ಮ ಮೂಲಸೌಕರ್ಯವನ್ನು ಪೂರೈಸಲು ಸಾಧ್ಯವಾಗುತ್ತದೆ.

ಇ ಶ್ರಮ್ ಕಾರ್ಡ್ ಪ್ರಯೋಜನಗಳು:

  1. ಅಸಂಘಟಿತ ವರ್ಗದ ನಾಗರಿಕರು ಇ-ಶ್ರಮ್ ಕಾರ್ಡ್ ಮೂಲಕ ಮಾಸಿಕ 1000 ರೂ. ಪಡೆಯಬಹುದು.
  2. ಇ-ಶ್ರಮ್ ಕಾರ್ಡ್ ಫಲಾನುಭವಿಗಳು 60 ವರ್ಷ ವಯೋಮಿತಿ ನಂತರ, ಪ್ರತಿ ತಿಂಗಳು 3000 ರೂ. ಪಿಂಚಣಿ ಪಡೆಯಬಹುದು.
  3. ಈ ಕಾರ್ಡ್ ಹೊಂದಿದವರಿಗೆ 2 ಲಕ್ಷ ರೂ ವರಗೆ ಅಪಘಾತ ವಿಮೆಯ ಪ್ರಯೋಜನವನ್ನು ಸಹ ಪಡೆಯಬಹುದು.
  4. ಇ-ಶ್ರಮ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಿಸಲು 1,20,000 ರೂ. ಸಹಾಯಧನ ಪಡೆಯಬಹುದು.
  5. ಇ ಶ್ರಮ್ ಕಾರ್ಡ್ ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ನೀಡಲಾಗುತ್ತದೆ.
  6. ಇ-ಶ್ರಮ್ ಕಾರ್ಡ್ ಹೊಂದಿರುವವರು ಮರಣದ ನಂತರ ಅವರ ಪತ್ನಿ ಇ-ಶ್ರಮ್ ಕಾರ್ಡ್ ಅಡಿಯಲ್ಲಿ 1500 ರೂ. ಆರ್ಥಿಕ ನೆರವು ನೀಡಲಾಗುತ್ತದೆ.

ಅರ್ಹರು:
16 ರಿಂದ 59 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ನೈರ್ಮಲ್ಯ ಕಾರ್ಮಿಕರು, ಕೃಷಿ ಕಾರ್ಮಿಕರು, ಮನೆಗೆಲಸ ಕಾರ್ಮಿಕರು, ಮೀನುಗಾರರು, ಆಶಾ ಕಾರ್ಯಕರ್ತೆಯರು, ಚಾಲಕರು, ಟೈಲರ್‌ಗಳು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಸರ್ಕಾರ ಗುರುತಿಸಿರುವ ಬಡತನ ರೇಖೆಗಿಂತ ಕೆಳಗಿರುವ ಸುಮಾರು 379 ವರ್ಗಗಳ ಕಾರ್ಮಿಕರು ಹಾಗೂ ಪಟ್ಟಿಯಲ್ಲಿ ಸೇರಿರದ ಅಸಂಘಟಿತ ಕಾರ್ಮಿಕರು ನೋಂದಣಿಯನ್ನು ಪಡೆಯಬಹುದು.

ಅಗತ್ಯ ದಾಖಲೆಗಳು:

  1. ಅರ್ಜಿದಾರರ ಆಧಾರ್ ಕಾರ್ಡ್
  2. ಬ್ಯಾಂಕ್ ಪಾಸ್ ಬುಕ್
  3. ರೇಷನ ಕಾರ್ಡ್
  4. ವಿಳಾಸ ಪುರಾವೆ
  5. 10 ನೇ ತರಗತಿ ಅಂಕ ಪಟ್ಟಿ
  6. ಆದಾಯ ಪ್ರಮಾಣಪತ್ರ
  7. ವಯಸ್ಸಿನ ಪ್ರಮಾಣಪತ್ರ
  8. ಪಾಸ್ಪೋರ್ಟ್ ಸೈಜ್ ಫೋಟೋ
  9. ಮೊಬೈಲ್ ನಂಬರ್

ಪ್ರಮುಖ ಲಿಂಕ್‌ಗಳು:
ಇ-ಶ್ರಮ್ ಕಾರ್ಡ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್‌ ವಿಳಾಸ: eshram.gov.in

  1. ಅನ್ನ ಭಾಗ್ಯ ಯೋಜನೆಯ ಹಣ ಬಂತಾ ನಿಮ್ಮಗೂ DBT Status ನೋಡಲು ಡೈರೆಕ್ಟ್ ಲಿಂಕ್‌
  2. ಬೆಳೆ ಪರಿಹಾರ: ರೈತರ ಖಾತೆಗೆ 3 ಸಾವಿರ ರೂ. ಜಮಾ ನಿಮಗೂ ಬಂತಾ ನೋಡಿ
  3. ಗೃಹಲಕ್ಷ್ಮಿ 4 ಸಾವಿರ ರೂ. ಜಮಾ ಮಾಡಲಾಗಿದೆ ! ನೀವು ಈ ರೀತಿ ಚೆಕ್ ಮಾಡಿ 
  4. ಸರ್ಕಾರದಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ

Leave a Comment