Gruha Lakshmi Update: ನಮಸ್ಕಾರ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ನಿಮ್ಮೆಲ್ಲರಿಗೂ ತಿಳಿಸುವುದೇಂದರೆ ನಮ್ಮ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಬಗ್ಗೆ ಗೃಹಲಕ್ಷ್ಮಿ ಯೋಜನೆಯ ಪೇಂಡಿಂಗ್ ಉಳಿದಿರುವ 11 ಮತ್ತು 12 ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ. ಎಂದು ಕಾಯುತ್ತಿರುವ ಮಹಿಳೆಯರಿಗೆ ಸಿಹಿ ಸುದ್ದಿ ನೀಡಲಾಗಿದೆ.
ನಮ್ಮಲ್ಲರಿಗೂ ತಿಳಿದಿರುವ ಹಾಗೆ ಇದುವರೆಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯರ ಖಾತೆಗೆ 10 ಕಂತುಗಳಲ್ಲಿ ಹಣ ಜಮಾ ಮಾಡಲಾಗಿದೆ. ಇದೀಗ ಪೇಂಡಿಂಗ್ ಉಳಿದಿರುವ ಜೂನ್ ಮತ್ತು ಜುಲೈ ತಿಂಗಳಿನ 11 ಮತ್ತು 12ನೇ ಕಂತಿನ ಹಣ ಇನ್ನು ಜಮಾ ಆಗಿಲ್ಲ ಆದರಿಂದ ಎರಡು ಕಂತಿನ ಹಣ ಸೇರಿ ಒಟ್ಟು ನಾಲ್ಕು ಸಾವಿರ ರೂಪಾಯಿ ಒಂದೇ ಬಾರಿಗೆ ಮುಂದೆ ಹಣ ಜಮಾ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ.
ಇದೀಗ ತಿಳಿದು ಬಂದಿರುವಂತಹ ಮಾಹಿತಿ ಪ್ರಕಾರ 4,000 ರೂ. ಹಣವನ್ನು ಫಲಾನುಭವಿ ಮಹಿಳೆಯರ ಖಾತೆಗೆ ಒಂದೇ ಸಲಕ್ಕೆ ಜಮಾ ಮಾಡಲಾಗುವುದು ಎಂದು ತಿಳಿಸಲಾಗಿದೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರ ಖಾತೆಗೆ 4000 ಅಂದರೆ ಎರಡು ಕಂತಿನ ಹಣ ಪಾವತಿ ಮಾಡಲಾಗುತ್ತದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ:
ಗೃಹಲಕ್ಷ್ಮಿ (Gruha Lakshmi Money) ಯೋಜನೆಯ ಕುರಿತು ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಕಾರಣಕ್ಕೂ ಐದು ಗ್ಯಾರಂಟಿಗಳನ್ನು ನಾವು ನಿಲ್ಲಿಸುವುದಿಲ್ಲ. ಜೂನ್ ಮತ್ತು ಜುಲೈ ತಿಂಗಳಿನ ಹಣ ಟ್ರೆಷರಿ (DBT) ಗೇ ಹಾಕಿದ್ದೇವೆ. ರಾಜ್ಯದ ಎಲ್ಲಾ ಮಹಿಳೆಯರ ಖಾತೆಗೆ ಒಂದು ವಾರದೊಳಗೆ ಕ್ರೆಡಿಟ್ ಆಗಲಿದೆ ಎಂದು ಸ್ಪಷ್ಟವಾಗಿ ತಿಳಿಸಿದರು. ಇನ್ನೂಳಿಂದ ಹಣವನ್ನು ಸರಿಯಾಗಿ ಹಣ ಪಾವತಿ ಮಾಡುತ್ತೇವೆ ಎನ್ನುವ ಸ್ಪಷ್ಟನೆ ಕೂಡ ಸಹ ನೀಡಿದರು.
- ಇ-ಶ್ರಮ ಕಾರ್ಡ್ ಫಲಾನುಭವಿಗಳಿಗೆ ಪ್ರತಿ ತಿಂಗಳು 1,000 ರೂ. ಖಾತೆಗೆ ಏನಿದು ಯೋಜನೆ ?
- ಅನ್ನ ಭಾಗ್ಯ ಯೋಜನೆಯ ಹಣ ಬಂತಾ ನಿಮ್ಮಗೂ DBT Status ನೋಡಲು ಡೈರೆಕ್ಟ್ ಲಿಂಕ್
- ಬೆಳೆ ಪರಿಹಾರ: ರೈತರ ಖಾತೆಗೆ 3 ಸಾವಿರ ರೂ. ಜಮಾ ನಿಮಗೂ ಬಂತಾ ನೋಡಿ