LPG Cylinder Price Hike: ದೇಶದ ಜನತೆಗೆ ತಿಂಗಳ ಮೊದಲ ದಿನವೇ ಶಾಕಿಂಗ್ ನ್ಯೂಸ್. ಗ್ಯಾಸ್ ಸಿಲಿಂಡರ್ ಬೆಲೆ ಆಗಸ್ಟ್ 1ರಿಂದ ಏರಿಕೆ, ಕೇಂದ್ರ ಸರ್ಕಾರದ ಬಜೆಟ್ ಎಫೆಕ್ಟ್‌ನಿಂದಾಗಿ ತೈಲ ಮಾರುಕಟ್ಟೆ ಕಂಪನಿಗಳು ದರ ಏರಿಕೆ ಮಾಡಲು ನಿರ್ಧರಿಸಿರುವುದರಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದಾರರ ಜೇಬಿಗೆ ಕತ್ತರಿ ಬೀಳಲಿದೆ. ದೇಶದ ಯಾವ ರಾಜ್ಯದಲ್ಲಿ ಗ್ಯಾಸ್ ದರ ಎಷ್ಟು ಏರಿಕೆಯಾಗಿದೆ ಅನ್ನೋದರ ಮಾಹಿತಿ ಇಲ್ಲಿದೆ.
ಆಗಸ್ಟ್ 1, ರಿಂದ LPG ಗ್ಯಾಸ್ ಸಿಲಿಂಡರ್‌ಗಳ ಮೇಲೆ ಬೆಲೆ ಏರಿಕೆ (LPG Price Hike) ಆಘಾತ ಉಂಟಾಗಿದೆ, ಕೇಂದ್ರ ಬಜೆಟ್ ನಂತರ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಕಂಪನಿಗಳು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿವೆ. ಆಗಸ್ಟ್ 1ರಂದು 19 kg ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಮಾತ್ರ ಏರಿಕೆ ಕಂಡಿದೆ, ಆದರೆ ಗೃಹ ಬಳಕೆ 14 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ ಸಮತಲ ಕಂಡಿದೆ.
IOCL ವೆಬ್‌ಸೈಟ್ ಪ್ರಕಾರ, (LPG Cylinder Price Hike) ದೇಶಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಹೊಸ ಬೆಲೆಗಳು ಇನ್ನೂ ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 1646 ರೂ. ನಿಂದ 1652.50 ರೂ.ಗೆ ಏರಿಕೆ ಆಗಿದೆ. ಈ ಸಿಲಿಂಡರ್‌ಗೆ 6.50 ರೂ. ಹೆಚ್ಚಾಗಿದೆ. ಹಾಗೂ ಕೋಲ್ಕತ್ತಾದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಇದುವರೆಗೆ 1756 ರೂ. ನಿಂದ 1,764.50 ರೂ. ಇದೆ. ಇಲ್ಲಿ 8.50 ರೂ ಏರಿಕೆಯಾಗಿದೆ. ಮತ್ತು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 1,732.5 ರೂ.ಗೆ ಏರಿಕೆಯಾಗಿದೆ.
ಗೃಹಬಳಕೆಯ ಸಿಲಿಂಡರ್ ಬೆಲೆ:
ಈ ನಡುವೆ ಗೃಹಬಳಕೆಯ ಎಲ್‌ಪಿಜಿ (LPG Cylinder) ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರುಪೇರು ಆಗಿಲ್ಲ ಯಥಾಸ್ಥಿತಿಯಲ್ಲಿದೆ.
ವಿವಿಧ ನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ (LPG Cylinder Price)
ಬೆಂಗಳೂರಿನಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ: 805.50 ರೂ.
ದೆಹಲಿಯಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ: 803 ರೂ.
ಕೋಲ್ಕತ್ತಾದಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ: 829 ರೂ.
ಮುಂಬೈನಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ: 802.50 ರೂ.
ಚೆನ್ನೈನಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ: 818.50 ರೂ.