ಪಿಎಂ ಕಿಸಾನ್ ಹಣ ಜಮಾ ಆಗಿರುವ ಮೆಸೇಜ್ ಬರುತ್ತಿಲ್ಲವೇ? ಈ ರೀತಿ eKYC ಮೊಬೈಲ್ ನಲ್ಲಿ ಮಾಡಿ PM Kisan EKYC

PM Kisan EKYC: ನಮಸ್ಕಾರ ರೈತ ಮಿತ್ರರೇ ಮತ್ತೊಂದು ಹೊಸ ಲೇಖನದಲ್ಲಿ ತಮ್ಮೆಲ್ಲರಿಗೂ ಸ್ವಾಗತ ಈ ಲೇಖನದ ಮೂಲಕ ನಿಮ್ಮೆಲ್ಲರಿಗೂ ತಿಳಿಸುವುದೇಂದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (PM Kisan) 17 ನೇ ಕಂತಿನ ಹಣ ಜೂನ್ ತಿಂಗಳಲ್ಲಿ ಜಮಾ ಆಗಿದೆ. ಆದರೀಗ 18 ನೇ ಕಂತಿನ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಆ ಹಣ ಜಮಾ ಆಗಬೇಕಾದರೆ ನೀವು (pm kisan ekyc) ಮಾಡಬೇಕು. ಹಾಗಾದರೆ ಈ ಲೇಖನ ಸಂಪೂರ್ಣ ಓದಬೇಕು.

ಏನಿದು ಪಿಎಂ ಕಿಸಾನ್ ಯೋಜನೆ?
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಒಂದಾದ ಪಿಎಂ ಕಿಸಾನ್ (PM Kisan Samman Nidhi Yojana) ಯೋಜನೆಯು ಒಂದು ಈ ಯೋಜನೆಯ ಮೂಲಕ ಭಾರತದ ರೈತರ ಖಾತೆಗೆ ವಾರ್ಷಿಕ ಮೂರು ಕಂತುಗಳಲ್ಲಿ 60,00 ರೂ. ಜಮಾ ಮಾಡಲಾಗುತ್ತದೆ. ಇದುವರೆಗೆ ಪಿಎಂ ಕಿಸಾನ್ ಸಮ್ಮಾನ ಯೋಜನೆಯ 17 ಕಂತಿನ ಹಣ ಬಿಡುಗಡೆ ಮಾಡಲಾಗಿದೆ.

ಇನ್ನೂ ಕೆಲವು ರೈತರ ಖಾತೆಗೆ 17 ನೇ ಕಂತಿನ ಹಣ ಜಮಾ ಆಗಿಲ್ಲ ಎಂಬುದು ದೂರು ಕೇಳಿ ಬರುತ್ತಿದೆ. ಈ ಕಾರಣಕ್ಕೆ ಮುಖ್ಯ ಕಾರಣವೇನೆಂದರೆ (PM Kisan Samman Nidhi status) ಫಲಾನುಭವಿಗಳು ತಮ್ಮ ಮೊಬೈಲ್ ನಂಬರ್‌ ಅನ್ನು ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ಅಪ್ಡೇಟ್ ಮಾಡದೇ ಇರುವುದರಿಂದ ಈ ಸಮಸ್ಯೆಯನ್ನು ಎದುರಿಸುತ್ತಿದ್ದಿರಾ.

ಹಾಗಾದರೆ ಈ ಸಮಸ್ಯೆ ಬಗೆಹರಿಸಲು ಇದೀಗ ಕಿಸಾನ್ ಸಮ್ಮನ್ ಪೋರ್ಟಲ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡಲು ಹೊಸ ಫೀಚರ್ ನೀಡಲಾಗಿದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಅಪ್ಡೇಟ್ ಮಾಡಿ ನಂತರ ಮುಂದೆ ಜಮಾ ಆಗುವ ಹಣದ ವಿವರ ನಿಮ್ಮ ಮೊಬೈಲ್ ನಂಬರ್ ಗೆ ಮೆಸೇಜ್ ಬರುತ್ತದೆ.

PM Kisan ಮೊಬೈಲ್ ನಂಬರ್ ಅಪ್ಡೇಟ್ ಮಾಡುವುದು ಹೇಗೆ?
ಹಂತ 1: ಮೊದಲಿಗೆ ನೀವು ಕೆಳಗೆ ನೀಡಿರುವ ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹಂತ 2: ನಂತರ ನೀವು ಮುಖಪುಟದಲ್ಲಿ ಭೇಟಿ ನೀಡುತ್ತಿರ ನಂತರ ಅಲ್ಲಿ ನಿಮ್ಮ ಆಧಾರ ನಂಬರ್ ನಮೂದಿಸಿ ನಂತರ ಕ್ಯಾಪ್ಚಾ ನಮೂದಿಸಿ Get OTP ಮೇಲೆ ಕ್ಲಿಕ್ ಮಾಡಿ.

ಹಂತ 3: ಅದಾದನಂತರ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಲಾದ ಮೊಬೈಲ್ ನಂಬರ್ ಗೆ OTP ಬರುತ್ತದೆ.ಅದನ್ನು ನಮೂದಿಸಿ ನಂತರ ಕೆಳಗೆ ನಿಮ್ಮ ಅನುಮತಿ (consent) ಕೇಳುತ್ತದೆ,ಅದರ ಮೇಲೆ ಕ್ಲಿಕ್ ಮಾಡಿ.

ಹಂತ 4: ಅದಾದಮೇಲೆ ನಿಮಗೆ ಒಂದು ಹೊಸ ಪುಟ್ಟ ತೆರೆಯುತ್ತದೆ. ಅದರಲ್ಲಿ ನಿಮ್ಮ ಹೊಸ ಮೊಬೈಲ್ ನಂಬರ್ ನಮೂದಿಸಿ ಅಪ್ಡೇಟ್ ಮೊಬೈಲ್ ನಂಬರ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಮೊಬೈಲ್ ಸಂಖ್ಯೆ ಅಪ್ಡೇಟ್ ಆಗುತ್ತದೆ.

ಈ ರೀತಿಯಲ್ಲಿ ನೀವು PM Kisan ಇ-ಕೆವೈಸಿ ಮಾಡಬಹುದು. ಇನ್ಮುಂದೆ ಪಿಎಂ ಕಿಸಾನ್ ಯಾವುದೇ ಕಂತಿನ ಹಣ ಜಮಾ ಆದರೆ ಮೊದಲು ನಿಮ್ಮ ಮೊಬೈಲ್ ನಂಬರ್ ಗೆ ಮೆಸೇಜ್ ಬರುತ್ತದೆ. ಈ ರೀತಿಯಲ್ಲಿ ಮನೆಯಲ್ಲಿ ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ಪಿಎಂ ಕಿಸಾನ್ ಯೋಜನೆಯ ಮೊಬೈಲ್ ನಂಬರ್ ಅಪ್ಡೇಟ್ ಮಾಡಬಹುದು.

ಪ್ರಮುಖ ಲಿಂಕ್‌ಗಳು:
ಮೊಬೈಲ್ ನಂಬರ್‌ ಅಪ್ಡೇಟ್ ಮಾಡಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: pmkisan.gov.in

  1. ಚಿನ್ನ ಖರೀದಿಸುವರಿಗೆ ಗುಡ್ ನ್ಯೂಸ್, ಚಿನ್ನದ ಬೆಲೆ ಮತ್ತೆ ಇಳಿಕೆ
  2. ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೂಡಿಕೆ ಮಾಡಿ, 74 ಲಕ್ಷ ಪಡೆಯಬಹುದು
  3. ದನದ ಕೊಟ್ಟಿಗೆ ನಿರ್ಮಾಣಕ್ಕೆ ಸರ್ಕಾರದಿಂದ 57,000 ರೂ. ಹಣ

Leave a Comment