ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೂಡಿಕೆ ಮಾಡಿ, 74 ಲಕ್ಷ ಪಡೆಯಬಹುದು Sukanya Samriddhi Yojana

admin

Sukanya Samriddhi Yojana
WhatsApp Group Join Now
Telegram Group Join Now

ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಭಾರತ ಸರ್ಕಾರವು ಹೆಣ್ಣು ಮಕ್ಕಳಿಗಾಗಿ ನೀಡುವ ರಾಷ್ಟ್ರೀಯ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯ ಮೂಲಕ ವಿಶೇಷವಾಗಿ ಪಾಲಕರು ತಮ್ಮ ಹೆಣ್ಣು ಮಗಳ ಭವಿಷ್ಯವನ್ನು ಭದ್ರಪಡಿಸಲು ಶಿಕ್ಷಣ ಅಥವಾ ಮದುವೆಗಾಗಿ ಈ ಯೋಜನೆಯಡಿ ಖಾತೆ ತೆರೆದು ಹಣವನ್ನು ಉಳಿತಾಯ ಮಾಡಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಜನಿಸಿದ ಹೆಣ್ಣುಮಕ್ಕಳ ಭವಿಷ್ಯದಲ್ಲಿ ಆರ್ಥಿಕ ತೊಂದರೆ ಎದುರಿಸುವುದನ್ನು ತಡೆಯುವ ಮುಖ್ಯ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಕನಿಷ್ಠ 250 ರೂ. ಯಿಂದ ಹೂಡಿಕೆಯ ಆರಂಭಿಸಬಹುದು.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಈ ಯೋಜನೆಯಲ್ಲಿ ಮೊದಲು ಬಡ್ಡಿದರ 7.6 % ರಷ್ಟಿತ್ತು, ಆದರೀಗ ಸರ್ಕಾರವು ಅದನ್ನು ಶೇಕಡಾ 8.2 ಕ್ಕೆ ಹೆಚ್ಚಿಸಿದೆ ಈ ಯೋಜನೆಯಲ್ಲಿ 48,000 ರೂ. ಹೂಡಿಕೆಯಿಂದ 14 ಲಕ್ಷ ರೂ.ಗಳ ಬಡ್ಡಿಯನ್ನು ಪಡೆಯಬಹುದು. ಈ ಒಂದು ಯೋಜನೆಯು ಹೆಣ್ಣು ಮಗುವಿನ, ವಿದ್ಯಾಭ್ಯಾಸ ಹಾಗೂ ಅವರ ಜೀವನ ರೂಪಿಸುವುದರಿಂದ ಮದುವೆಗೆ ಬಳಸಿಕೊಳ್ಳಬಹುದು.

ಯಾರು ಅರ್ಜಿ ಸಲ್ಲಿಸಬಹುದು?
ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ, ಕುಟುಂಬದ ಹೆಣ್ಣು ಮಗಳ ಹೆಸರಿನಲ್ಲಿ ಖಾತೆಯನ್ನು ತೆರೆಯಬೇಕು.

ಯಾವಾಗ ಠೇವಣಿ ಆರಂಭಿಸುವುದು?
ನಿಮ್ಮ ಕುಟುಂಬದ ಹೆಣ್ಣುಮಗಳ ವಯಸ್ಸು 10 ವರ್ಷದೊಳಗೆ ಖಾತೆ ತೆರೆಯಬೇಕು.ಒಂದು ಕುಟುಂಬದಲ್ಲಿ ಗರಿಷ್ಠ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯಬಹುದು. ಒಂದು ವೇಳೆ ಅವಳಿ ಹೆಣ್ಣು ಮಕ್ಕಳು ಜನಿಸಿದರೆ, ಆ ಇಬ್ಬರೂ ಅಲ್ಲದೇ ಇನ್ನೂ ಒಂದು ಹೆಣ್ಣು ಮಗುವಿನ ಹೆಸರಿನಲ್ಲಿ ಸಹ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಎಷ್ಟು ಹೂಡಿಕೆ ಮಾಡುವುದು?
ನಿಮ್ಮ ಮಗಳ ಹೆಸರಿನಲ್ಲಿ ಒಂದು ವರ್ಷದಲ್ಲಿ 250 ರೂ.ನಿಂದ 1.5 ಲಕ್ಷ ರೂವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆ 21 ವರ್ಷಕ್ಕೆ ಮುಕ್ತಾಯವಾಗುತ್ತದೆ. ಆದರೆ, ಹೂಡಿಕೆ ಅವಧಿ ಕನಿಷ್ಠ 15 ವರ್ಷ ಮಾಡಬೇಕು. ಮಗಳ ವಯಸ್ಸು 18 ವರ್ಷ ಆನಂತರ ಯೋಜನೆಯಲ್ಲಿನ ಶೇ. 50ರಷ್ಟು ಹಣವನ್ನು ಹಿಂಪಡೆಯಲ್ಲು ಅವಕಾಶ ಇರುತ್ತದೆ.

ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಳು:
ಪೋಷಕರ ಆಧಾರ್ ಕಾರ್ಡ್
ಹೆಣ್ಣು ಮಕ್ಕಳ ಜನನ ಪ್ರಮಾಣಪತ್ರ
ಪೋಷಕರ ಪ್ಯಾನ್ ಕಾರ್ಡ್
ಬ್ಯಾಂಕ್ ಖಾತೆ ಸಂಖ್ಯೆ
ಆದಾಯ ಪ್ರಮಾಣಪತ್ರ
ನಿವಾಸ ಪ್ರಮಾಣಪತ್ರ
ಮೊಬೈಲ್ ಸಂಖ್ಯೆ
ಪಾಸ್‌ಪೋರ್ಟ್ ಸೈಜ್ ಪೋಟೋ

ಅರ್ಜಿ ಸಲ್ಲಿಸುವ ಪ್ರಕ್ರಿಯೆ:
ಮೊದಲು ಮಗಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಬೇಕು. ಬ್ಯಾಂಕಿನಲ್ಲಿಯೇ ಲಭ್ಯವಿರುವ ಸುಕನ್ಯಾ ಸಮೃದ್ಧಿ ಯೋಜನೆಯ ಅರ್ಜಿ ನಮೂನೆಗಳು ಸಂಪೂರ್ಣವಾಗಿ ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು. ಅರ್ಜಿ ನಂತರ ಕನಿಷ್ಠ ಪ್ರೀಮಿಯಂ 250 ಹಾಗೂ ಗರಿಷ್ಠ ಒಂದು ಲಕ್ಷವರೆಗೂ ಠೇವಣಿ ಪ್ರಾರಂಭಿಸಬೇಕು. ಬ್ಯಾಂಕಿನಲ್ಲಿ ಠೇವಣಿ ಅರ್ಜಿ ನಮೂನೆಯನ್ನು ಪರಿಶೀಲಿಸಿ. ಎಲ್ಲವೂ ಸರಿಯಾಗಿ ಪಡೆದು ಅರ್ಜಿ ನಮೂನೆ ಸಲ್ಲಿಸಿ ರಸೀದಿ ನೀಡುತ್ತಾರೆ. ಆ ರಸೀದಿಯನ್ನು ಎಚ್ಚರಿಕೆಯಿಂದ ಇಟ್ಟುಕೊಳ್ಳಬೇಕು ಮಗಳ ಭವಿಷ್ಯಕ್ಕಾಗಿ.

  1. ಅನ್ನ ಭಾಗ್ಯ ಯೋಜನೆಯ ಹಣ ಬಂತಾ ನಿಮ್ಮಗೂ DBT Status ನೋಡಲು ಡೈರೆಕ್ಟ್ ಲಿಂಕ್‌ 
  2. ದನದ ಕೊಟ್ಟಿಗೆ ನಿರ್ಮಾಣಕ್ಕೆ ಸರ್ಕಾರದಿಂದ 57,000 ರೂ. ಹಣ
  3. ಗೃಹಲಕ್ಷ್ಮಿ ಪೇಂಡಿಂಗ್ 4,000 ರೂ. ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ
WhatsApp Group Join Now
Telegram Group Join Now

Leave a Comment