Tractor Subsidy Scheme: ನಮಸ್ಕಾರ ರೈತ ಮಿತ್ರರೇ ಇವತ್ತಿನ ಮತ್ತೊಂದು ಹೊಸ ಲೇಖನಕ್ಕೆ ಸ್ವಾಗತ ಇಂದಿನ ಈ ಲೇಖನದ ಮೂಲಕ ನಿಮ್ಮೇಲ್ಲರಿಗೂ ತಿಳಿಸುವುದೇನೆಂದರೆ ಕೇಂದ್ರ ಸರ್ಕಾರವು ಕೃಷಿ ವಿಭಾಗಕ್ಕೆ ಸಂಬಂಧಿಸಿದಂತೆ ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಅದರಲ್ಲಿ ಇದೀಗ ಮತ್ತೊಂದು ಹೊಸ ಯೋಜನೆ ಇದಾಗಿದೆ ಅದುವೇ ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ ಮತ್ತು ಸಹಾಯಧನವನ್ನು ನೀಡುತ್ತಿದೆ. ಅರ್ಜಿ ಸಲ್ಲಿಸಲು ಯಾರು ಅರ್ಹರು ಹಾಗೂ ಅರ್ಜಿ ಸಲ್ಲಿಸಲು ದಾಖಲೆಗಳೆನ್ನು ಬೇಕು ಸಂಪೂರ್ಣವಾದ ಮಾಹಿತಿ ಕೆಳಗೆ ನೀಡಲಾಗಿದೆ.
ಈ ಯೋಜನೆಯ ಲಾಭ ಏನು.?
ಪ್ರಧಾನಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಯೋಜನೆಯಲ್ಲಿ ಅನುಮೋದಿಸಿದ ಪ್ರಸ್ತಾವನೆಯ ಪ್ರಕಾರ, ರೈತರು ಹೊಸ ಟ್ರ್ಯಾಕ್ಟರ್ ಖರೀದಿಸಲು ಬಯಸುವವರಿಗೆ ಶೇಕಡಾ 50% ಸಬ್ಸಿಡಿ ಸರ್ಕಾರ ನೀಡುತ್ತದೆ. ಇದರರ್ಥ ರೈತರು 5 ಲಕ್ಷ ರೂ. ವೆಚ್ಚದಲ್ಲಿ ಟ್ರಾಕ್ಟರ್ ಖರೀದಿಸಿದರೆ ಅವರು 2.5 ಲಕ್ಷ ಸಬ್ಸಿಡಿ ಪಡೆಯುತ್ತಾರೆ ಹಾಗೂ ತಾವು ಕೇವಲ 2.5 ಲಕ್ಷ ರೂ. ವೆಚ್ಚವನ್ನು ಪಾವತಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಯಾರು ಅರ್ಹರು?
- (PM Kisan Tractor Subsidy Scheme) ಯೋಜನೆಗೆ ಅರ್ಜಿ ಸಲ್ಲಿಸಲು ದೇಶದ ಎಲ್ಲ ರೈತರು ಅರ್ಹ ಪಿಎಂ ಕಿಸಾನ್ ಟ್ಯಾಕ್ಟರ್ ಯೋಜನೆಯಡಿಯಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
- ಈ ಹಿಂದೆ ರೈತರು ಈ ಯೋಜನೆಯ ಕಳೆದ ಏಳು ವರ್ಷಗಳಲ್ಲಿ ಸರ್ಕಾರದ ಯಾವುದೇ ಯೋಜನೆಯ ಅಡಿಯಲ್ಲಿ ಟ್ಯಾಕ್ಟರ್ ಯೋಜನೆಗೆ ಅರ್ಜಿ ಸಲ್ಲಿಸಿರಬಾರದು.
- ಈ ಯೋಜನೆಗೆ ರೈತರು ಅರ್ಜಿ ಸಲ್ಲಿಸಬೇಕಾದರೆ ಸ್ವಂತ ಕೃಷಿ ಭೂಮಿ ಹೊಂದಿರಬೇಕು.
- ಒಂದು ಕುಟುಂಬದಲ್ಲಿ ಏಕಮಾತ್ರ ರೈತರು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಟ್ಯಾಕ್ಟರ್ ಖರೀದಿಸಬಹುದು.
- ಈ ಯೋಜನೆಯಡಿಯಲ್ಲಿ ಟ್ಯಾಕ್ಟರ್ ಖರೀದಿಸಿದ ನಂತರ ಬೇರೆ ಯಾವುದೇ ಸಬ್ಸಿಡಿ ಯೋಜನೆಗಳೊಂದಿಗೆ ಸಂಯೋಜಿಸಿರಬಾರದು.
- ಈ ಯೋಜನೆಯ ಲಾಭ ಪಡೆಯಲು ಕಡಿಮೆ ಇಡುವಳಿ ಭೂಮಿಯನ್ನು ಹೊಂದಿರುವಂತಹ ರೈತರಿಗೆ ಮಾತ್ರ ಅರ್ಹರು..
ಅರ್ಜಿ ಸಲ್ಲಿಸಲು ದಾಖಲೆಗಳು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಜಮೀನಿನ ಪತ್ರಗಳು
- ಮೊಬೈಲ್ ನಂಬರ್
- ಬ್ಯಾಂಕ್ ಪಾಸ್ ಬುಕ್
- ಇತ್ತೀಚಿನ ಪೋಟೋ
- ಪಹಣಿ ಮತ್ತು ಹಕ್ಕು ಪತ್ರ
ಅರ್ಜಿ ಸಲ್ಲಿಸುವುದು ಹೇಗೆ.?
ನಾವು ಈ ಮೇಲೆ ತಿಳಿಸಿರುವ ಅಗತ್ಯ ದಾಖಲೆಗಳೊಂದಿಗೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಸಬ್ಸಿಡಿ ಟ್ಯಾಕ್ಟರ್ ಪಡೆಯಲು ಹತ್ತಿರದ Common Service Sentre (csc) ಕೇಂದ್ರಕ್ಕೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
ಹೊಸ ಯೋಜನೆಗಳು: